Monday, 20 November 2023

ಕರ್ನಾಟಕ ಸರ್ಕಾರ ಸಚಿವಾಲಯ ಕ್ಲಬ್ ವತಿಯಿಂದ ೬೮ನೇ ಕರ್ನಾಟಕ ರಾಜ್ಯೋತ್ಸವ


 ಕರ್ನಾಟಕ ಸರ್ಕಾರ ಸಚಿವಾಲಯ ಕ್ಲಬ್ ವತಿಯಿಂದ
೬೮ನೇ ಕರ್ನಾಟಕ ರಾಜ್ಯೋತ್ಸವ
ಕರ್ನಾಟಕ ಸರ್ಕಾರ ಸಚಿವಾಲಯ ಕ್ಲಬ್ ವತಿಯಿಂದ ೬೮ನೇ ಕರ್ನಾಟಕ ರಾಜ್ಯೋತ್ಸವ ದ ಪ್ರಯುಕ್ತ ಇದೇ ನವೆಂಬರ್ ಮಾಹೆಯ 17, 21, 22, 28 & 29 ರಂದು ಪ್ರತಿ ದಿನ ಮಧ್ಯಾಹ್ನ 1.35ಕ್ಕೆ ಒಟ್ಟು ಐದು ದಿನಗಳು ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. 

ತಾವೆಲ್ಲರೂ ಎಲ್ಲಾ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸುವಂತೆ ಕಾರ್ಯಕಾರಿ ಸಮಿತಿಯ ಪರವಾಗಿ ವಿನಂತಿಸುತ್ತೇನೆ..🙏

ಮಹೇಂದ್ರ ಎಂ ವಿ
ಸಾಂಸ್ಕೃತಿಕ ಹಾಗೂ ಹೊರಾಂಗಣ ಕ್ರೀಡಾ ಕಾರ್ಯದರ್ಶಿ
ಕರ್ನಾಟಕ ಸರ್ಕಾರ ಸಚಿವಾಲಯ ಕ್ಲಬ್

                  ಕ್ಲಬ್ ನ ಎಲ್ಲ ಕಾರ್ಯಕ್ರಮಗಳಿಗೂ ತಾವೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಯಶಸ್ವಿಗೊಳಿಸಿದ್ದಾಕ್ಕಾಗಿ ಎಲ್ಲರಿಗೂ ಅನಂತಾನಂತ ಧನ್ಯವಾದಗಳು..🙏
ನಿಮ್ಮ ಸಲಹೆ, ಸಹಕಾರ ಮತ್ತು ಪ್ರೋತ್ಸಾಹ ಸದಾ ಹೀಗೆ ಇರಲಿ..

                  6ನೇ ಕಾರ್ಯಕ್ರಮ- ದಿನಾಂಕ 22-11-2023 ಬುಧವಾರ-  
ಪ್ರೊ. ಕೃಷ್ಣೇಗೌಡರ ಹಾಸ್ಯೋತ್ಸವ


ಕೆ.ಜಿ.ಎಸ್. ಕ್ಲಬ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕರ್ನಾಟಕ ರಾಜ್ಯೋತ್ಸವದ  5ನೇ ದಿನದ ಸಮಾರೋಪ ಕಾರ್ಯಕ್ರಮ ಪ್ರೊ. ಕೃಷ್ಣೇಗೌಡರ ಹಾಸ್ಯೋತ್ಸವದ ದೃಶ್ಯಾವಳಿಗಳು...








=======================================

4ನೇ ಕಾರ್ಯಕ್ರಮ-28-11-2023 ಮಂಗಳವಾರ ನಾದೋಪಾಸನ ತಂಡ ಹಾಗೂ ಕೆ.ಜಿ.ಎಸ್‌ ಕ್ಲಬ್‌ ಸದಸ್ಯರಿಂದ ಸ್ವರ ಮಾಧುರ್ಯ-ಗಾಯನ ಕಾರ್ಯಕ್ರಮ











=================================

3ನೇ ಕಾರ್ಯಕ್ರಮ- ದಿನಾಂಕ 22-11-2023 ಬುಧವಾರ
ಮಾಲತೇಶ್‌ ಬಡಿಗೇರ್‌ ನಿರ್ದೇಶನದ
" ಮಾರಿಕಾಡು
"   ನಾಟಕ


ಡಾ. ಚಂದ್ರಶೇಖರ ಕಂಬಾರ ಅವರ ನಾಟಕ ಕೃತಿ ‘ಮಾರೀಕಾಡು. ಆಂಗ್ಲ ನಾಟಕಕಾರ ವಿಲಿಯಂ ಷೇಕ್ಸ್ ಪಿಯರ್ ನ ಮ್ಯಾಕ್ ಬೆತ್ ನಾಟಕ ಆಧಾರಿತ ಕೃತಿ ಇದು. ಮೂಲ ನಾಟಕದಲ್ಲಿಯ ಮ್ಯಾಕ್ ಬೆತ್ ಮಾರೀಕಾಡುನಲ್ಲಿ ಮದಕರಿಯಾಗಿ ಹಾಗೂ ಮೂಲದ ಬರ್ನಮ್, ಕಂಬಾರರ ನಾಟಕದಲ್ಲಿ ಮಾರೀಕಾಡು ಆಗಿ ಪರಿವರ್ತನೆಗೊಂಡಿದೆ. ಪಕ್ಕಾ ಕನ್ನಡ ಜಾನಪದೀಯ ಶೈಲಿಯಲ್ಲಿ ನಾಟಕವು ರೂಪುಗೊಂಡಿದೆ. ಕಾಡಿನ ರಹಸ್ಯಗಳನ್ನು ಅರಿಯದೇ ನಾಶಗೊಳ್ಳುವ ಮನುಷ್ಯ ಹಾಗೂ ಅಧಿಕಾರದ ಹಪಾಹಪಿಯು ನಾಟಕದ ಮೂಲ ಕೇಂದ್ರವಾಗಿದೆ. ಇಂಗ್ಲಿಷ್ ನಾಟಕದ ಕಥೆಯಾದರೂ ಅದು ಕನ್ನಡ ಜಾನಪದೀಯವಾಗಿ ಉಸಿರಾಡುತ್ತದೆ. ಅನ್ಯಭಾಷೆಯ ಸಾಹಿತ್ಯವನ್ನು ಎಷ್ಟು ಚೆನ್ನಾಗಿ ಕನ್ನಡೀಕರಿಸಬಹುದು ಎಂಬುದಕ್ಕೆ ಮಾರೀಕಾಡು ನಾಟಕ ಕನ್ನಡಿ ಹಿಡಿಯುತ್ತದೆ.

A play inspired by William Shakespeare`s Macbeth which is one of Shakespeare`s finest plays and presents a man`s conscience and the effect of guilt on his mind, adapted in Kannada as “MAARIKAADU which resonates as the destruction wrought when ambition goes unchecked by moral constraints. The play is written by Chandrashekhara Kambara who has been conferred with many prestigious awards including Padma Bhushan, Jnanpith Award, Padma Shri and Sahitya Akademi Award for kannada writers. This Play is Directed by Maltesh Badiger  at KGS Club, Cubbon Park, Bangalore  on 22nd Nov 2023



























================================================
2ನೇ ಕಾರ್ಯಕ್ರಮ- ದಿನಾಂಕ 21-11-2023 ಮಂಗಳವಾರ
ವಿದುಷಿ ಶ್ರೀಮತಿ ಸೋನಿಯಾ ಪೊದುಮಾಳ್‌, ಕಲಾಗ್ರಣಿ ಪ್ರತಿಷ್ಟಾನದ ವತಿಯಿಂದ 
ನೃತ್ಯ ವೈಭವ



























=======================================================================

ಮೊದಲ ಕಾರ್ಯಕ್ರಮ


ದಿನಾಂಕ -17-11-2023 ಶುಕ್ರವಾರ-
ಶ್ರೀ ಚೆನ್ನಪ್ಪ ಹುದ್ದಾರ್‌ ಹಾಗೂ ಕುಮಾರಿ ಪೃಥ್ವಿ ಭಟ್‌ ರವರಿಂದ
ಸಂಗೀತ ರಸಮಂಜರಿ ಕಾರ್ಯಕ್ರಮ